ರೇಣುಕಾ ಚೌಧರಿ (ಜನನ ೧೩ ಆಗಸ್ಟ್ ೧೯೫೪) ಒಬ್ಬ ಭಾರತೀಯ ರಾಜಕಾರಣಿ ಅಗಿದ್ದರು. ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಒಬ್ಬ ಸದಸ್ಯೆ. ಇವರು ಆಂಧ್ರ ಪ್ರದೇಶದಿಂದ ರಾಜ್ಯಸಭೆಯಲ್ಲಿ ರಾಜಕೀಯ ಪಕ್ಷವನ್ನು ಪ್ರತಿನಿಧಿಸಿದರು. ಇವರು ಭಾರತ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ ಸಚಿವಾಲಯದ ಕೇಂದ್ರ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಸಹ ಸೇವೆ ಸಲ್ಲಿಸಿದ್ದಾರೆ. == ಆರಂಭಿಕ ಜೀವನ == ಇವರು ಏರ್ ಕಮೋಡೋರ್ ಸೂರ್ಯನಾರಾಯಣ ರಾವ್ ಮತ್ತು ವಸುಂಧರಾ ದಂಪತಿಗೆ ೧೩ ಆಗಸ್ಟ್ ೧೯೫೪ ರಂದು ವಿಶಾಖಪಟ್ಟಣಂ (ಆಂಧ್ರಪ್ರದೇಶ) ನಲ್ಲಿ ಜನಿಸಿದರು. ಮೂವರು ಹೆಣ್ಣು ಮಕ್ಕಳಲ್ಲಿ ರೇಣುಕಾ ಹಿರಿಯವರು. ಅವರು ಡೆಹ್ರಾಡೂನ್‌ನ ವೆಲ್‌ಹ್ಯಾಮ್ ಗರ್ಲ್ಸ್ ಸ್ಕೂಲ್‌ನಲ್ಲಿ ಅಧ್ಯಯನ ಮಾಡಿದರು ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಇಂಡಸ್ಟ್ರಿಯಲ್ ಸೈಕಾಲಜಿಯಲ್ಲಿ ಬಿಎ ಪಡೆದರು. ರೇಣುಕಾ ೧೯೭೩ ರಲ್ಲಿ ಶ್ರೀಧರ್ ಚೌಧರಿ ಅವರನ್ನು ವಿವಾಹವಾದರು == ವೃತ್ತಿ == ಚೌಧರಿ ಅವರು ತೆಲುಗು ದೇಶಂ ಪಕ್ಷದ ಸದಸ್ಯರಾಗಿ ೧೯೮೪ ರಲ್ಲಿ ರಾಜಕೀಯ ಪ್ರವೇಶಿಸಿದರು. ಇವರು ಸತತ ಎರಡು ಬಾರಿ ರಾಜ್ಯಸಭೆಯ ಸದಸ್ಯರಾಗಿದ್ದರು. ೧೯೮೬ ರಿಂದ ೧೯೯೮ ರವರೆಗೆ ತೆಲುಗು ದೇಶಂ ಸಂಸದೀಯ ಪಕ್ಷದ ಮುಖ್ಯ ಸಚೇತಕರಾಗಿದ್ದರು. ಅವರು ಎಚ್‌ಡಿ ದೇವೇಗೌಡರ ಸಂಪುಟದಲ್ಲಿ ೧೯೯೭ ರಿಂದ ೧೯೯೮ ರವರೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾಗಿದ್ದರು. ಅವರು ೧೯೯೮ ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರಲು ತೆಲುಗು ದೇಶಂ ಪಕ್ಷವನ್ನು ತೊರೆದರು. ೧೯೯೯ ಮತ್ತು ೨೦೦೪ ರಲ್ಲಿ, ಅವರು ಖಮ್ಮಂ ಅನ್ನು ಪ್ರತಿನಿಧಿಸುವ ಕ್ರಮವಾಗಿ ೧೩ ಮತ್ತು ೧೪ ನೇ ಲೋಕಸಭೆಗೆ ಆಯ್ಕೆಯಾದರು. ಇತರ ಸ್ಥಾನಗಳಲ್ಲಿ ಹಣಕಾಸು ಸಮಿತಿಯ ಸದಸ್ಯತ್ವಗಳು (೧೯೯೯-೨೦೦೦) ಮತ್ತು ಮಹಿಳಾ ಸಬಲೀಕರಣ ಸಮಿತಿ (೨೦೦೦-೨೦೦೧) ಸೇರಿವೆ. ಮೇ ೨೦೦೪ರಲ್ಲಿ ಅವರು ಯುಪಿಎ ಐ ಸರ್ಕಾರದಲ್ಲಿ ಪ್ರವಾಸೋದ್ಯಮ ರಾಜ್ಯ ಸಚಿವರಾದರು. ಅವರು ಯುಪಿಎ ಐ ಸರ್ಕಾರದಲ್ಲಿ ಜನವರಿ ೨೦೦೬ ರಿಂದ ಮೇ ೨೦೦೯ ರವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಕೇಂದ್ರ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ಆಗಿದ್ದರು. ಮೇ ೨೦೦೯ ರ ಲೋಕಸಭಾ ಚುನಾವಣೆಯಲ್ಲಿ, ರೇಣುಕಾ ಚೌಧರಿ ಅವರು ಖಮ್ಮಂನಿಂದ ಟಿಡಿಪಿಯ ನಾಮ ನಾಗೇಶ್ವರ ರಾವ್ ಅವರಿಂದ ೧,೨೪,೪೪೮ ಮತಗಳಿಂದ ಸೋತರು. ಮುಂಬೈ ಪತ್ರಿಕೆ ಮಿಡ್ ಡೇ ೨೦೦೯ ರಲ್ಲಿ ವರದಿ ಮಾದಿದ ಪ್ರಕಾರ, "ಶ್ರೀರಾಮ ಸೇನೆಯ ವ್ಯಾಲೆಂಟೈನ್ಸ್ ಡೇ ಬೆದರಿಕೆ"ಗೆ ಪ್ರತಿಕ್ರಿಯೆಯಾಗಿ ಚೌಧರಿ ಯುವಕರು ಪಬ್‌ಗಳನ್ನು "ಗುಂಪುಗೊಳಿಸಬೇಕು" ಮತ್ತು "ನೈತಿಕ ಪೊಲೀಸ್ ದಳ" ದತ್ತ ಗಮನ ಹರಿಸಬೇಕು ಎಂದು ಹೇಳಿದರು. ೨೦೦೯ ರ ಮಂಗಳೂರು ಪಬ್ ದಾಳಿಯ ನಂತರ ಶ್ರೀರಾಮಸೇನೆ ಚೌಡಯ್ಯನವರು ಮಂಗಳೂರನ್ನು "ತಾಲಿಬಾನೀಕರಣಗೊಳಿಸಲಾಗಿದೆ" ಎಂದು ಪ್ರತಿಕ್ರಿಯಿಸಿದರು. ಇದು ನಗರದ ಮೇಯರ್ ಅವರ ವಿರುದ್ಧ ಪ್ರಕರಣವನ್ನು ದಾಖಲಾಗುವಂತೆ ಮಾಡಿತು. ಅವರು ಪ್ರತ್ಯೇಕ ಘಟನೆಗಳನ್ನು ವೈಭವೀಕರಿಸುತ್ತಾರೆ ಮತ್ತು ನಗರದ ಬಗ್ಗೆ ಸಾಮಾನ್ಯವಾದ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು. "ಪಬ್ ಭರೋ" ಅಭಿಯಾನವನ್ನು ವಾಸ್ತವವಾಗಿ ಅವರ ಕಿರಿಯ ಮಗಳು ತೇಜಸ್ವಿನಿ ನೇತೃತ್ವ ವಹಿಸಿದ್ದರು. === ಸಂಸದೀಯ ಸಮಿತಿಗಳು === ಸದಸ್ಯ, ಹಣಕಾಸು ಸಮಿತಿ (೧೯೯೯-೨೦೦೦) ಸದಸ್ಯ, ಮಹಿಳಾ ಸಬಲೀಕರಣ ಸಮಿತಿ (೨೦೦೦-೨೦೦೧) ಸದಸ್ಯರು, ಸರ್ಕಾರದ ಭರವಸೆಗಳ ಸಮಿತಿ (ಮೇ ೨೦೧೨ - ಸೆಪ್ಟೆಂಬರ್ ೨೦೧೪) ಸದಸ್ಯ, ಹಣಕಾಸು ಸಮಿತಿ (ಮೇ ೨೦೧೨- ಮೇ ೨೦೧೪) ಸದಸ್ಯ, ವ್ಯವಹಾರ ಸಲಹಾ ಸಮಿತಿ (ಮೇ ೨೦೧೩- ಸೆಪ್ಟೆಂಬರ್ ೨೦೧೪) ಸದಸ್ಯ, ಕೃಷಿ ಸಮಿತಿ (ಸೆಪ್ಟೆಂಬರ್. ೨೦೧೪–ಇಂದಿನವರೆಗೆ) ಸದಸ್ಯ, ಸದನ ಸಮಿತಿ (ಸೆಪ್ಟೆಂಬರ್. ೨೦೧೪–ಇಂದಿನವರೆಗೆ) ಸದಸ್ಯ, ಸಾಮಾನ್ಯ ಉದ್ದೇಶಗಳ ಸಮಿತಿ (ಏಪ್ರಿಲ್ ೨೦೧೬ - ಪ್ರಸ್ತುತ) ಅಧ್ಯಕ್ಷರು, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ ಮತ್ತು ಅರಣ್ಯಗಳ ಸಮಿತಿ (ಏಪ್ರಿಲ್ ೨೦೧೬- ೨೦೧೮) == ಉಲ್ಲೇಖಗಳು == == ಸಹ ನೋಡಿ == .. ನಲ್ಲಿ ರೇಣುಕಾ ಚೌಧರಿ ಪ್ರೊಫೈಲ್